ಪದಗುಚ್ಛ ಪುಸ್ತಕ

ತಾಯ್ನುಡಿ ದಿನ.

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!