© Milkos | Dreamstime.com

ಪದಗುಚ್ಛ ಪುಸ್ತಕ

ಯಾಂತ್ರಿಕ ಭಾಷಾಂತರ

© Milkos | Dreamstime.com
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....