আ-- -ি--প-্যন্- -ণ-া ক-ি ৷
আ_ তি_ প____ গ__ ক_ ৷
আ-ি ত-ন প-্-ন-ত গ-ন- ক-ি ৷
--------------------------
আমি তিন পর্যন্ত গণনা করি ৷ 0 ā-- --na p-----ta--a--n- ---iā__ t___ p_______ g_____ k___ā-i t-n- p-r-a-t- g-ṇ-n- k-r------------------------------āmi tina paryanta gaṇanā kari
ನಮ್ಮ ಆಲೋಚನೆಗಳು ನಮ್ಮ ಭಾಷೆಯನ್ನು ಅವಲಂಬಿಸಿರುತ್ತದೆ.
ನಾವು ಆಲೋಚನೆ ಮಾಡುವಾಗ ನಮ್ಮೊಡನೆ “ಮಾತನಾಡುತ್ತಿರುತ್ತೇವೆ”.
ಹಾಗಾಗಿ ನಮ್ಮ ಭಾಷೆ ವಸ್ತುಗಳನ್ನು ನೋಡುವ ನಮ್ಮ ದೃಷ್ಟಿಕೋಣದ ಮೇಲೆ ಪ್ರಭಾವ ಬೀರುತ್ತದೆ.
ನಾವೆಲ್ಲರೂ ವಿವಿಧ ಭಾಷೆಗಳನ್ನು ಹೊಂದಿದ್ದರೂ ಒಂದೆ ತರಹ ಆಲೋಚನೆ ಮಾಡಲು ಸಾಧ್ಯವೆ?
ಅಥವಾ ಬೇರೆ ಭಾಷೆಗಳನ್ನು ಮಾತನಾಡುವುದರಿಂದ ವಿಭಿನ್ನವಾಗಿ ಯೋಚಿಸುತ್ತೇವೆಯೆ?
ಪ್ರತಿಯೊಂದು ಜನಾಂಗ ತನ್ನದೆ ವಿಶಿಷ್ಟವಾದ ಶಬ್ದಕೋಶವನ್ನು ಹೊಂದಿರುತ್ತದೆ.
ಹಲವು ಭಾಷೆಗಳಲ್ಲಿ ಹಲವು ಖಚಿತ ಪದಗಳು ಇರುವುದಿಲ್ಲ.
ಹಲವು ಬುಡಕಟ್ಟಿನವರು ಹಸಿರು ಮತ್ತು ನೀಲಿ ಬಣ್ಣಗಳ ಮಧ್ಯೆ ಬೇಧ ಮಾಡುವುದಿಲ್ಲ.
ಇವರು ಎರಡೂ ಬಣ್ಣಗಳಿಗೆ ಒಂದೆ ಪದವನ್ನು ಉಪಯೋಗಿಸುತ್ತಾರೆ.
ಮತ್ತು ಅವರು ಬಣ್ಣಗಳನ್ನು ಗುರುತಿಸುವುದರಲ್ಲಿ ಬೇರೆ ಜನಾಂಗದವರಿಗಿಂತ ಕಳಪೆಯಾಗಿರುತ್ತಾರೆ.
ಛಾಯ ಬಣ್ಣಗಳು ಹಾಗೂ ಮಿಶ್ರಬಣ್ಣಗಳನ್ನು ಗುರುತಿಸುವ ಶಕ್ತಿ ಇವರಿಗೆ ಇರುವುದಿಲ್ಲ.
ಆಡುಗಾರರಿಗೆ ಬಣ್ಣಗಳನ್ನು ವರ್ಣಿಸುವಾಗ ತೊಂದರೆ ಆಗುತ್ತದೆ.
ಹಲವು ಭಾಷೆಗಳಲ್ಲಿ ಕೆಲವೆ ಸಂಖ್ಯಾ ಪದಗಳಿವೆ.
ಈ ಭಾಷೆಯ ಆಡುಗಾರರು ಕೆಟ್ಟದಾಗಿ ಎಣಿಸುತ್ತಾರೆ.
ಹಲವಾರು ಭಾಷೆಗಳಲ್ಲಿ ಎಡ ಮತ್ತು ಬಲ ದ ಕಲ್ಪನೆ ಇಲ್ಲ.
ಈ ಸ್ಥಳಗಳಲ್ಲಿ ಮನುಷ್ಯರು ಉತ್ತರ ಮತ್ತು ದಕ್ಷಿಣ, ಪಶ್ಚಿಮ ಮತ್ತು ಪೂರ್ವದ ಬಗ್ಗೆ ಮಾತನಾಡುತ್ತಾರೆ.
ಅವರು ಭೌತಿಕ ದಿಕ್ಕುಗಳನ್ನು ಚೆನ್ನಾಗಿ ಗುರುತಿಸಬಲ್ಲರು.
ಆದರೆ ಬಲ ಮತ್ತು ಎಡ ಗಳ ಪರಿಕಲ್ಪನೆ ಹೊಂದಿರುವುದಿಲ್ಲ.
ಕೇವಲ ನಮ್ಮ ಭಾಷೆ ಮಾತ್ರ ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುವುದಿಲ್ಲ.
ನಮ್ಮ ಪರಿಸರ ಮತ್ತು ನಮ್ಮ ದೈನಂದಿಕ ಜೀವನ ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ.
ಹಾಗಿದ್ದಲ್ಲಿ ಭಾಷೆ ಯಾವ ಪಾತ್ರ ವಹಿಸುತ್ತದೆ?
ಅದು ನಮ್ಮ ಆಲೋಚನೆಗಳಿಗೆ ಎಲ್ಲೆಗಳನ್ನು ಹಾಕುತ್ತದೆಯೆ?
ಅಥವಾ ನಮ್ಮಲ್ಲಿ, ನಾವು ಯಾವುದರ ಬಗ್ಗೆ ಯೋಚಿಸುತ್ತೇವೆಯೊ, ಅವಕ್ಕೆ ಮಾತ್ರ ಪದಗಳಿವೆಯೆ?
ಯಾವುದು ಕಾರಣ, ಯಾವುದು ಪರಿಣಾಮ?
ಈ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರಗಳಿಲ್ಲ.
ಇವುಗಳು ಮಿದುಳು ಸಂಶೋಧಕರು ಹಾಗೂ ವಿಜ್ಞಾನಿಗಳನ್ನು ಕಾಡುತ್ತಾ ಇವೆ.
ಈ ವಿಷಯ ನಮ್ನೆಲ್ಲರಿಗೂ ಸಂಬಧಿಸಿದೆ...
ನಿನ್ನ ಭಾಷೆ ನೀನು ಯಾರು ಎಂಬುದನ್ನು ನಿರ್ಧರಿಸುತ್ತದೆ.