С-рен------тим - п-в----ицу д--н-.
С_______ з____ у п___ у____ д_____
С-р-н-т- з-т-м у п-в- у-и-у д-с-о-
----------------------------------
Скрените затим у прву улицу десно. 0 I-i-e ---o --a-u-la.I____ l___ i__ u____I-i-e l-v- i-a u-l-.--------------------Idite levo iza ugla.
ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ.
ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ.
ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ.
ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ.
ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ.
ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ.
ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ.
ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ.
ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ.
ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ.
ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ.
ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ.
ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ.
ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ.
ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ.
ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ.
ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ.
ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ.
ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ.
ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ.
ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ.
ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ.
ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ.
ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ.
ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು.
ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ.
ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ.
ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.