ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   tr Çalışmak

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [elli beş]

Çalışmak

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟರ್ಕಿಷ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? M----k ------ -------y---u---? M_____ o_____ n_ y____________ M-s-e- o-a-a- n- y-p-y-r-u-u-? ------------------------------ Meslek olarak ne yapıyorsunuz? 0
ನನ್ನ ಗಂಡ ವೃತ್ತಿಯಿಂದ ವೈದ್ಯರು. Ko-----o-t--. K____ d______ K-c-m d-k-o-. ------------- Kocam doktor. 0
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. Be- ya--m---n hemşi---o---ak--alışı---um. B__ y____ g__ h______ o_____ ç___________ B-n y-r-m g-n h-m-i-e o-a-a- ç-l-ş-y-r-m- ----------------------------------------- Ben yarım gün hemşire olarak çalışıyorum. 0
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. Ya--n-------li -lac---z. Y______ e_____ o________ Y-k-n-a e-e-l- o-a-a-ı-. ------------------------ Yakında emekli olacağız. 0
ಆದರೆ ತೆರಿಗೆಗಳು ತುಂಬಾ ಜಾಸ್ತಿ. A----er-iler-y-k-ek. A__ v_______ y______ A-a v-r-i-e- y-k-e-. -------------------- Ama vergiler yüksek. 0
ಮತ್ತು ಆರೋಗ್ಯವಿಮೆ ದುಬಾರಿ. Ve-h-s-a-ık--ig----s- -ü--ek. V_ h_______ s________ y______ V- h-s-a-ı- s-g-r-a-ı y-k-e-. ----------------------------- Ve hastalık sigortası yüksek. 0
ನೀನು ಮುಂದೆ ಏನಾಗಲು ಬಯಸುತ್ತೀಯ? Ne ol-ak--st-yo-sun? N_ o____ i__________ N- o-m-k i-t-y-r-u-? -------------------- Ne olmak istiyorsun? 0
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. Mü--nd-s-ol-ak i-t--or--. M_______ o____ i_________ M-h-n-i- o-m-k i-t-y-r-m- ------------------------- Mühendis olmak istiyorum. 0
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. Ü--v-rs---de -ku-a- --tiyo--m. Ü___________ o_____ i_________ Ü-i-e-s-t-d- o-u-a- i-t-y-r-m- ------------------------------ Üniversitede okumak istiyorum. 0
ನಾನು ತರಬೇತಿ ಪಡೆಯುತ್ತಿದ್ದೇನೆ. B---s---y-r--. B__ s_________ B-n s-a-y-r-m- -------------- Ben stajyerim. 0
ನಾನು ಹೆಚ್ಚು ಸಂಪಾದಿಸುವುದಿಲ್ಲ. F-z-- --za--ı-o-um. F____ k____________ F-z-a k-z-n-ı-o-u-. ------------------- Fazla kazanmıyorum. 0
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. Y-r- -ışı--- -t-j-ya----r-m. Y___ d______ s___ y_________ Y-r- d-ş-n-a s-a- y-p-y-r-m- ---------------------------- Yurt dışında staj yapıyorum. 0
ಅವರು ನನ್ನ ಮೇಲಧಿಕಾರಿ. B--be--m şe---. B_ b____ ş_____ B- b-n-m ş-f-m- --------------- Bu benim şefim. 0
ನನ್ನ ಸಹೋದ್ಯೋಗಿಗಳು ಒಳ್ಳೆಯವರು. Ho--arkada-l-r-- v-r. H__ a___________ v___ H-ş a-k-d-ş-a-ı- v-r- --------------------- Hoş arkadaşlarım var. 0
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. Öğ-en-er---e--k-nt--- gid-y-r--. Ö________ h__ k______ g_________ Ö-l-n-e-i h-p k-n-i-e g-d-y-r-z- -------------------------------- Öğlenleri hep kantine gidiyoruz. 0
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. İ--a--y-r--. İ_ a________ İ- a-ı-o-u-. ------------ İş arıyorum. 0
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. Bir--ı-dı--iş--z-m. B__ y_____ i_______ B-r y-l-ı- i-s-z-m- ------------------- Bir yıldır işsizim. 0
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. B--ülkede---- iş-iz--a-. B_ ü_____ ç__ i____ v___ B- ü-k-d- ç-k i-s-z v-r- ------------------------ Bu ülkede çok işsiz var. 0

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.